ನಟ ಸುದೀಪ್ ಮತ್ತು ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಸಿನಿಮಾ ನಾಳೆ ಅಂದರೆ ಶುಕ್ರವಾರ ರಿಲೀಸ್ ಆಗಲಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್ ಅಭಿನಯದ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಇದೀಗ ಸಲ್ಲುಗೆ ಪೈಪೋಟಿ ಕೊಡಲು ‘ಕವಲುದಾರಿ’ ಖ್ಯಾತಿಯ ರಿಷಿ ಮುಂದಾಗಿದ್ದಾರೆ.

ನಾಳೆ (ಡಿಸೆಂಬರ್ 20) ಕನ್ನಡದ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಈ ಪೈಕಿ ರಿಷಿ ಅಭಿನಯದ ‘ಸಾರ್ವಜನಿಕರಲ್ಲಿ ಸುವರ್ಣಾವಕಾಶ’ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಯಶಸ್ವಿ ಕಂಡಿದೆ. ಚಿತ್ರದಲ್ಲಿ ರಿಷಿಗೆ ಧನ್ಯಾ ಬಾಲಕೃಷ್ಣ ಜೋಡಿಯಾಗಿದ್ದಾರೆ. ಸಿನಿಮಾವನ್ನು ಅನೂಪ್ ರಾಮಸ್ವಾಮಿ ನಿರ್ದೇಶನ ಮಾಡಿದ್ದಾರೆ.

ಇನ್ನೂ ಬಾಲಿವುಡ್ ಬಿಗ್ ಸಿನಿಮಾ ‘ದಬಾಂಗ್ 3’ ಡಿಸೆಂಬರ್ 20 ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಕನ್ನಡದಲ್ಲಿಯೂ ಡಬ್ ಆಗಿ ತೆರೆಗೆ ಬರುತ್ತಿದೆ. ಈ ಸಿನಿಮಾಗಳ ಜೊತೆಗೆ ‘ಗರ್ನಲ್’ ಎಂಬ ಸಿನಿಮಾ ರಿಲೀಸ್ ಆಗುತ್ತಿದೆ. ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರವಾಗಿದೆ.