ಸಿದ್ಧಸೂತ್ರವ ಬಿಟ್ಟು ಮಾಡಿದ ಆನೆಬಲ ಈ ವರ್ಷಗಳನ್ನ ಬಂದಿರುವ ಕಲ್ಟ್ ಚಿತ್ರ. ಯಾವುದೇ ಸಿನಿಮಾ ಆಗ್ಲಿ ಕಂಪ್ಲೀಟ್ ಸಿನಿಮಾ ಮುಗಿಯುವವರೆಗೂ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಂಡರೆ ಪ್ರೇಕ್ಷಕನಿಗೆ ಬಹಳ ಹತ್ತಿರವಾಗಿಬಿಡುತ್ತೆ. ಅದೇ ಸಾಲಿಗೆ ಸೇರಿರುವಂತ ಸಿನಿಮಾ ಅಂದ್ರೆ ಅದು ‘ಆನೆ ಬಲ’. ಸಿನಿಮಾ ಕಂಪ್ಲಿಟ್ ಆಗುವವರೆಗೂ ಬಹಳ ಕ್ಯೂರಿಯಾಸಿಟಿ ಮತ್ತು ಇಂಟ್ರೆಸ್ಟ್ ಕ್ರಿಯೇಟ್ ಮಾಡೋ ಶಕ್ತಿಯನ್ನ ಆನೆಬಲ ಸಿನಿಮಾ ಹೊಂದಿದೆ.

ಇದೊಂದು ವಿಭಿನ್ನ ಕಥೆಯನ್ನ ಹೊಂದಿರುವ ಸಿನಿಮಾ. ಊರಿನ ಬಗ್ಗೆ ಅಪಾರ ಗೌರವ ಹೊಂದಿರುವ ಯುವಕರ ತಂಡದ ಸಿನಿಮಾ. ಕಾಮಿಡಿ ಜೊತೆಯಲ್ಲಿ ಊರಿನ ಹೆಸರನ್ನು ಉಳಿಸಲು ಸ್ನೇಹಿತರನ್ನ ಬಿಡದೇ ಜೊತೆಯಲ್ಲೇ ಸಾಗುತ್ತಾನೆ. ಸಿನಿಮಾದಲ್ಲಿ ದೋಷಗಳು ಇಲ್ಲವೆಂದೆನಿಲ್ಲ. ಆದರೆ ಅದಕ್ಕೂ ಮೀರಿ ಒಳ್ಳೆಯ ಅಂಶಗಳೇ ಹೆಚ್ಚಾಗಿ ಚಿತ್ರದುದ್ದಕ್ಕೂ ಸಿಗುತ್ತವೆ.

ಸಿನಿಮಾದಲ್ಲಿ ಕೇಳ ಸಿಗುವ ‘ನಾವು ಚೆಂಗ್ಲು ಹುಡುಗರೇ ಇರಬಹುದು ಆದ್ರೆ ಊರಿನ ವಿಷಯಕ್ಕೆ ಬಂದರೇ ನಾವು ಒಳ್ಳೆಯವರೇ’ ಎಂಬ ಡೈಲಾಗ್ ಇಡೀ ಸಿನಿಮಾದ ಕಥೆಯನ್ನು ಸಾರುತ್ತಿದೆ. ಹಾಗೇ ಸಿನಿಮಾದುದ್ದಕ್ಕೂ ಹೆಣ್ಣಿನ ಮಹತ್ವವನ್ನು ಸಾರಲಾಗಿದೆ. ಜಿಲ್ಲಾ ಮಟ್ಟದ ರಾಗಿ ಮುದ್ದೆ ಸ್ವರ್ಧೆ ಮಾಡಬೇಕೆನ್ನುವ ಶಿವನ ಮಾತಿನಿಂದ ಇಡೀ ಸಿನೆಮಾ ಬೇರೊಂದು ತಿರುವು ಪಡೆದುಕೊಂಡು ಚಿತ್ರಕ್ಕೆ ಒಂದು ಶಕ್ತಿಯನ್ನ ತುಂಬುತ್ತದೆ.

ಸಿನಿಮಾದಲ್ಲಿ ಪ್ರೀತಿ ವಿಚಾರವನ್ನು ಎಷ್ಟು ಬೇಕು ಅಷ್ಟನ್ನ ಹೇಳಿರುವ ನಿರ್ದೇಶಕ ರಾಜು, ಚಿತ್ರದುದ್ದಕ್ಕೂ ಹಳ್ಳಿಯ ಹುಡುಗರಿಗೆ ಇರಬೇಕಾದ ಜವಾಬ್ದಾರಿಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನ ಒಟ್ಟು ಹೂರಣವನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಟ್ಟೆಗೌಡ ಅದ್ಧೂರಿಯಾಗಿ ದೃಶ್ಯ ಸೆರೆ ಹಿಡಿದಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು ಹಾಡುಗಳು ಇಂಪಾಗಿವೆ. ಸಾಗರ್ ಸೇರಿದಂತೆ ಬಹುತೇಕ ನಟರು ಸಹಜವಾಗಿ ಅಭಿನಯಿಸಿದ್ದಾರೆ, ಅದು ಇಡೀ ಸಿನೆಮಾದ ಪ್ಲಸ್ ಪಾಯಿಂಟ್. ಸಂಭಾಷಣೆ ಚುರುಕಾಗಿದೆ ಹೆಚ್ಚಾಗಿ ಸಂದರ್ಭೋಚಿತವಾಗಿವೆ. ಆನೆಬಲ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.