ಇತ್ತೀಚೆಗೆ ಫೋಟೋಶೂಟ್ ಟ್ರೆಂಡ್ ಆಗಿದೆ. ಅದರಲ್ಲೂ ವಿವಿಧ ರೀತಿಯ ಕಾಸ್ಟ್ಯೂಮ್ ಧರಿಸಿಕೊಂಡು ನಟಿಯರು ಫೋಟೋಶೂಟ್ ಮಾಡಿಸುತ್ತಾರೆ. ಇದೀಗ ‘ಕುಲವಧು’ ಧಾರಾವಾಹಿ ಖ್ಯಾತಿಯ ವಚನಾ ಗ್ರಾಮೀಣ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಅಮೃತಾ ರಾಮಮೂರ್ತಿ ಸೀರಿಯಲ್‍ನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇತ್ತೀಚೆಗಷ್ಟೆ ಗ್ರಾಮೀಣ ಉಡುಗೆ ಅಂದರೆ ಲಂಗ ದಾವಣಿ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಗ್ರಾಮೀಣ ಲುಕ್‍ನಲ್ಲಿ ಅಮೃತಾ ಪಕ್ಕ ಹಳ್ಳಿಯ ಹುಡುಗಿಯ ರೀತಿ ಕಾಣಿಸಿಕೊಂಡಿದ್ದಾರೆ.

ಹಳ್ಳಿಯ ಮನೆನೊಂದರ ಕಟ್ಟೆ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಕಾಲಿಗೆ ಗೆಜ್ಜೆ ಹಾಕುವ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೋಗಳನ್ನು ಅಮೃತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಅಮೃತಾ ಗ್ರಾಮೀಣ ಉಡುಪಿನಲ್ಲಿಯೂ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅಮೃತಾ ತಮ್ಮ ಪ್ರಿಯಕರ ರಘು ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಘು ಮತ್ತು ಅಮೃತಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ.