‘6-5=2’ ಎಂಬ ಚಿತ್ರದ ಮೂಲಕ ಸದ್ದು ಮಾಡಿದ್ದ ನವ ನಿರ್ದೇಶಕ ಅಶೋಕ್ ಕೆ.ಎಸ್ ನಿರ್ದೇಶನದ ಎರಡನೇ ಚಿತ್ರ ‘ದಿಯಾ’ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದ ಅಶೋಕ್ ಈಗ ಹೊಸ ತಂಡ ಕಟ್ಟಿಕೊಂಡು ರೋಮ್ಯಾಂಟಿಕ್ ಅಂಡ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ಬಂದಿದ್ದಾರೆ. ಈಗಾಗಲೇ ‘ದಿಯಾ’ ಚಿತ್ರ ರಿಲೀಸ್ ಹೊಸ್ತಿಲಿಗೆ ಬಂದು ನಿಂತಿದ್ದು, ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

‘ದಿಯಾ’ ಚಿತ್ರದಲ್ಲಿ ದೀಕ್ಷಿತ್, ಖುಷಿ, ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪವಿತ್ರ ಲೋಕೇಶ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಈ ಹಿಂದೆ ‘6-5=2’ ಚಿತ್ರ ನಿರ್ಮಾಣ ಮಾಡಿದ್ದ ಕೃಷ್ಣ ಚೈತನ್ಯ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ದಿಯಾ ಚಿತ್ರಕ್ಕಿದೆ.

ಈಗಾಗಲೇ ಬಿಡುಗಡೆಯಾಗಿರುವ ಎರಡೂ ಟ್ರೈಲರ್‍ಗಳು ಯೂಟ್ಯೂಬ್ ಹಾಗೂ ಸೋಶಿಯಲ್ ಸೈಟ್‍ಗಳಲ್ಲಿ ಮೆಚ್ಚುಗೆ ಪಡೆದುಕೊಂಡಿವೆ. ಮೊದಲ ಪ್ರಯತ್ನದಲ್ಲಿ ಗೆದ್ದಿದ್ದ ನಿರ್ದೇಶಕ ಅಶೋಕ್ ಕೆ.ಎಸ್. ತಮ್ಮ ಎರಡನೇ ಪ್ರಯತ್ನದಲ್ಲೂ ಗೆಲುವಿನ ನಗೆ ಬೀರುತ್ತಾರ ಅನ್ನೋದು ಕಾದು ನೋಡಬೇಕು. ಫೆ. 7ಕ್ಕೆ ದಿಯಾ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರಲಿದೆ.