ಸ್ಯಾಂಡಲ್‍ವುಡ್ ಹಿರಿಯ ನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಇತ್ತೀಚೆಗೆ ನಟ, ನಿರೂಪಕ ಕಿರಣ್ ಶ್ರೀನಿವಾಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇವರಿಬ್ಬರು ಹನಿಮೂನ್‍ಗೆ ಹೋಗಿದ್ದು, ಅಲ್ಲಿ ಕಿತ್ತಾಡಿಕೊಂಡಿದ್ದಾರೆ.

ದಂಪತಿ ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದು ಶಾಕ್ ಆಗಬೇಡಿ. ಹಿತಾ ಹಾಗೂ ಕಿರಣ್ ಹನಿಮೂನ್ ಎಂಜಾಯ್ ಮಾಡಲು ಮಡಗಾಸ್ಕರ್ ಈಶಾನ್ಯ ಭಾಗದಲ್ಲಿರುವ ಸೀಶೆಲ್ಸ್ ನ ದ್ವೀಪಕ್ಕೆ ಹೋಗಿದ್ದಾರೆ. ಆದರೆ ಈ ನಡುವೆ ಇಬ್ಬರು ಕಾಲಿನಿಂದ ಪರಸ್ಪರ ಒದ್ದಿದ್ದಾರೆ. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಹಿತಾ ಹಾಗೂ ಕಿರಣ್ ತಮಾಷೆಗಾಗಿ ಈ ರೀತಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಹೊರತು ಅವರ ನಡುವೆ ಯಾವುದೇ ಜಗಳವಾಗಿಲ್ಲ. ಸದ್ಯ ಇವರಿಬ್ಬರ ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಿತಾ ತಮ್ಮ ಇನ್‍ಸ್ಟಾದಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲು ಕಿರಣ್ ಕೈ ಹಿಡಿದಿರುವ ಫೋಟೋ ಹಾಕಿದ್ದಾರೆ. ಬಳಿಕ ಕಾಲಿನಿಂದ ಒದೆಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಂತರ ಕಿರಣ್ ಕೆಳಗೆ ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತ ಕಿರಣ್ ಕೂಡ ಇದೇ ರೀತಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕಿರಣ್, ಹಿತಾ ಕೈ ಹಿಡಿದಿದ್ದಾರೆ. ಎರಡನೇ ಫೋಟೋದಲ್ಲಿ ಕಿರಣ್‍ಗೆ ಕಾಲಿನಿಂದ ಒದೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಂತರ ಹಿತಾ ಕೆಳಗೆ ಬಿದ್ದಿರುವ ಫೋಟೋವನ್ನು ಕಿರಣ್ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಸಿಹಿ ಕಹಿ ಚಂದ್ರು ಅವರಂತೆಯೇ ದಂಪತಿ ಪರಸ್ಪರ ಚೆನ್ನಾಗಿ ಕಾಲೆಳೆಯುತ್ತಿದ್ದೀರಿ. ಇದೇ ರೀತಿ ನೀವು ಚೆನ್ನಾಗಿ ಇರಿ ಎಂದು ಕಮೆಂಟ್ ಮಾಡಿ ಜೋಡಿಗೆ ಶುಭ ಕೋರುತ್ತಿದ್ದಾರೆ.

ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು.

ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ನಟಿ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

View this post on Instagram

Hat or that?

A post shared by Hitha Chandrashekar (@thehithaceee) on