ವಾರ್ಷಿಕ ಗಳಿಕೆಯಲ್ಲಿ ಸದಾ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ನಟ ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಂದೆ ಬಂದಿದ್ದಾರೆ.

ಹೌದು…ಫೋರ್ಬ್ಸ್ ನಿಯತಕಾಲಿಕೆ 2019ರ ಸಾಲಿನ ಭಾರತೀಯ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲ ಬಾರಿಗೆ ಬಾಲಿವುಡ್ ನಟರನ್ನು ಹಿಂದಿಕ್ಕಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 2ನೇ ಸ್ಥಾನವನ್ನು ಅಕ್ಷಯ್ ಕುಮಾರ್ ಪಡೆದಿದ್ದಾರೆ. ಈ ಮೂಲಕ ಸದಾ ಮೊದಲನೇ ಸ್ಥಾನದಲ್ಲಿರುತ್ತಿದ್ದ ಸಲ್ಮಾನ್ ಖಾನ್ ಈ ಬಾರಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸಲ್ಮಾನ್ ಖಾನ್ ವಾರ್ಷಿಕ ಆದಾಯ 229.25 ಕೋಟಿ ಇದೆ. ಆದರೆ ಅಕ್ಷಯ್ ಕುಮಾರ್ ವಾರ್ಷಿಕ ಆದಾಯ 2019ರಲ್ಲಿ 293.25 ಕೋಟಿ ಗಳಿಕೆಯಿದೆ. ಹೀಗಾಗಿ ಸಲ್ಮಾರನ್ನು ಹಿಂದಿಕ್ಕಿ ಅಕ್ಷಯ್ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 4ನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಇದ್ದಾರೆ. ಇವರ ವಾರ್ಷಿಕ ಆದಾಯ 239.25 ಕೋಟಿ ಇದೆ. ಇನ್ನೂ 6ನೇ ಸ್ಥಾನದಲ್ಲಿ ಶಾರುಖ್ ಖಾನ್, 7ನೇ ಸ್ಥಾನದಲ್ಲಿ ರಣ್‍ವೀರ್ ಸಿಂಗ್ ಇದ್ದಾರೆ.


ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ಅಲಿಯಾ ಭಟ್ ಕೂಡ ಮಹಿಳಾ ಸೆಲೆಬ್ರಿಟಿ ಟಾಪ್ 10 ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 8ನೇ ಸ್ಥಾನದಲ್ಲಿ ನಟಿ ಅಲಿಯಾ ಭಟ್ ಮತ್ತು 10ನೇ ಸ್ಥಾನದಲ್ಲಿ ದೀಪಿಕಾ ಸ್ಥಾನ ಪಡೆದಿಕೊಂಡಿದ್ದಾರೆ.

ಫೋರ್ಬ್ಸ್ ನಿಯತಕಾಲಿಕೆ ರ‌್ಯಾಂಕ್ ಅನ್ನು ಕೇವಲ ಆದಾಯದ ಆಧಾರದ ಮೇಲೆ ನಿರ್ಧಾರ ಮಾಡಲ್ಲ. ಆದಾಯದ ಜೊತೆಗೆ ಸೆಲೆಬ್ರಿಟಿಗಳ ಖ್ಯಾತಿ ಕೂಡ ಲೆಕ್ಕಹಾಕುತ್ತದೆ ಎಂದು ತಿಳಿದು ಬಂದಿದೆ.