ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿ ಚಂದನ್ ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡಬೇಡಿ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬುಧವಾರ ಬಿಗ್‍ಬಾಸ್, ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ ನಲ್ಲಿ ಚಂದನ್ ಹಾಗೂ ದೀಪಿಕಾ ಸೋಲುತ್ತಾರೆ. ಹಾಗಾಗಿ ಬಿಗ್‍ಬಾಸ್ ಅವರಿಗೆ ಡ್ಯಾನ್ಸ್ ಮಾಡುವ ಶಿಕ್ಷೆಯನ್ನು ನೀಡುತ್ತಾರೆ. ಅಲ್ಲದೆ ಅವರಿಗೆ ಟೈಯರ್ಡ್ ಆದಾಗ ಬೇರೆ ಸ್ಪರ್ಧಿಗಳಿಗೆ ಡ್ಯಾನ್ಸ್ ಮಾಡಲು ಹೇಳಿದ್ದರು.

ಚಂದನ್ ಹಾಗೂ ದೀಪಿಕಾ ಹೆಡ್‍ಫೋನ್ ಹಾಕಿ ಡ್ಯಾನ್ಸ್ ಮಾಡುವಾಗ ಶೈನ್ ಹಾಗೂ ಚೈತ್ರಾ ಅವರ ಮುಂದೆ ನಿಂತುಕೊಂಡು ಮಾತಾಡುತ್ತಿದ್ದರು. ಈ ವೇಳೆ ದೀಪಿಕಾ ಇಬ್ಬರಿಗೂ ಫ್ರೆಶಪ್ ಆಗಲು ಹೇಳುತ್ತಾರೆ. ಆದರೆ ಶೈನ್, ದೀಪಿಕಾ ಅವರನ್ನು ಮಾತಾಡಿಸುತ್ತಿದ್ದರು. ಇದನ್ನು ನೋಡಿದ ಚಂದನ್ ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡಬೇಡಿ ಎಂದು ಶೈನ್‍ಗೆ ಹೇಳಿದ್ದಾರೆ. ಚಂದನ್ ಮಾತು ಕೇಳಿ ಶೈನ್ ಶಾಕ್ ಆಗಿದ್ದಾರೆ.

ಈ ಮೊದಲು ಚಂದನ್, ನೀನು ದೀಪಿಕಾಗೆ ಏನೂ ಹೇಳಬೇಡ. ನಿನ್ನ ಪಾಟ್ನರ್ ನ ನೀನು ನೋಡಿಕೋ. ನನ್ನ ಪಾಟ್ನರ್‌ಗೆ ನೀನು ಏನು ಹೇಳಬೇಡ ಎಂದು ಕಿಶನ್‍ಗೆ ವಾರ್ನ್ ಮಾಡಿದ್ದರು. ಆಗ ಕಿಶನ್, ದೀಪಿಕಾ ನನ್ನ ಸ್ನೇಹಿತೆ. ಅವರ ಜೊತೆ ಮಾತಾಡಬೇಡ ಎಂದು ಹೇಳುವುದಕ್ಕೆ ನಿನಗೆ ಹಕ್ಕಿಲ್ಲ ಎಂದು ಹೇಳಿದ್ದರು.ಆಗ  ಇಬ್ಬರ ನಡುವೆ ವಾದ-ವಿವಾದ ಹೆಚ್ಚಾಗುತ್ತಿದ್ದಂತೆ ದೀಪಿಕಾ ಬಂದ ಚಂದನ್ ಅವರಿಗೆ ಸಮಾಧಾನ ಮಾಡಿದ್ದರು.