‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ಇದೀಗ ‘ಶಿವಾರ್ಜುನ’ನಾಗಿ ಎಲ್ಲರನ್ನು ರಂಜಿಸಲು ಬರುತ್ತಿದ್ದಾರೆ. ನಾಳೆ ಅಂದರೆ ಮಾರ್ಚ್ 12ರಂದು ಎಲ್ಲಾ ಚಿತ್ರಮಂದಿರಗಳಲ್ಲೂ ‘ಶಿವಾರ್ಜುನ’ ಲಗ್ಗೆ ಇಡುತ್ತಿದ್ದಾನೆ.

ಸಿನಿಮಾ ಈಗಾಗಲೇ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ. ಟೈಟಲ್ ನಿಂದ ಹಿಡಿದು, ಹೊಸಬರ ಎಂಟ್ರಿವರೆಗೆ ವಿಶೇಷವಾಗಿದೆ. ಸಿನಿಮಾದಲ್ಲಿ ಶಿವ-ಅರ್ಜುನನಿಗೆ ಸಂಬಂಧಿಸಿದಂತ ಎರಡು ಕ್ಯಾರೆಕ್ಟರ್ ಇದೆ. ಹೀಗಾಗಿ ಆ ಎರಡು ಕ್ಯಾರೆಕ್ಟರ್ ಗೆ ಮ್ಯಾಚ್ ಆಗುವಂತ ಟೈಟಲ್ ಹುಡುಕುವಾಗ ಚಿತ್ರತಂಡಕ್ಕೆ ಹೊಳೆದಿದ್ದು ಇದೆ ‘ಶಿವಾರ್ಜುನ’ ಹೆಸರು. ಕಾಕತಾಳೀಯವೆಂಬಂತೆ ಈ ಸಿನಿಮಾದ ನಿರ್ಮಾಪಕರ ಹೆಸರು ಕೂಡ ಶಿವಾರ್ಜುನ ಆಗಿದೆ. ಜೊತೆಗೆ ಈ ಚಿತ್ರ ನಿರ್ದೇಶಕರ ಹೆಸರು ಕೂಡ ಶಿವತೇಜಸ್. ಹೀಗಾಗಿ ಕಥೆಗೆ ಟೈಟಲ್ ಅದ್ಭುತವಾಗಿ ಮ್ಯಾಚ್ ಆಗುತ್ತಿದ್ದರಿಂದ ‘ಶಿವಾರ್ಜುನ’ನನ್ನೇ ಫೈನಲ್ ಮಾಡಿದ್ದಾರೆ ಅಂತಾರೆ ನಿರ್ದೇಶಕರು.

ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ. ಜನ ಸಿನಿಮಾಗೆ ಹೋಗೋದೆ ಮನರಂಜನೆಗಾಗಿ. ಆ ಎರಡು ಗಂಟೆಗಳ ಮನರಂಜನೆಯನ್ನ ‘ಶಿವಾರ್ಜುನ’ ಪಕ್ಕ ನೀಡಲಿದ್ದಾನೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿರುವುದರಿಂದ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿ ಬರಲು ಕಾರಣ ನಿರ್ಮಾಪಕ ಸಹಕಾರ ಅಂತಾರೆ ನಿರ್ದೇಶಕ ಶಿವತೇಜಸ್. ಸಿನಿಮಾಗೆ ಏನೆಲ್ಲಾ ಬೇಕು, ಕ್ಯಾರೆಕ್ಟರ್ ಗಳು, ಜಾಗ ಎಲ್ಲವನ್ನು ಕೇಳಿದ್ದಂತೆ ಒದಗಿಸಿಕೊಟ್ಟಿದ್ದಾರೆ. ಯಾವುದಕ್ಕೂ ಕಾಂಪ್ರೂಮೈಸ್ ಆಗುವ ಸಂಭವವೇ ಬಂದಿಲ್ಲ. ಒಬ್ಬ ಡೈರೆಕ್ಟರ್ ಏನ್ ನಿರೀಕ್ಷೆ ಮಾಡ್ತಾನೋ ಎಲ್ಲವನ್ನು ಒದಗಿಸಿದ್ದಾರೆ ಎಂಬ ಖುಷಿಯ ಮಾತುಗಳನ್ನಾಡಿದ್ದಾರೆ.

ಶಿವ ತೇಜಸ್ ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಶಿವಾರ್ಜುನ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಸುರಾಗ್, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ನಾಳೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಇಡೀ ಫ್ಯಾಮಿಲಿ ಸಮೇತ ಕುಳಿತು ನೋಡುವಂತ ಕಂಟೆಂಟ್ ಸಿನಿಮಾದಲ್ಲಿದ್ದು, ವಾರಾಂತ್ಯಕ್ಕೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮೂಡುವುದರಲ್ಲಿ ಸಂಶಯವಿಲ್ಲ.