ಸ್ಯಾಂಡಲ್‍ವುಡ್‍ನಲ್ಲಿ ಟೈಟಲ್‍ನ ಮೂಲಕವೇ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ ‘ಮೌನಂ’ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಒಂದು ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷಕರೆದುರಿಗೆ ಬರುತ್ತಿರುವ ‘ಮೌನಂ’ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದಾರೆ.

ರಿಲೀಸ್ ಆದ ಟ್ರೈಲರಿನಲ್ಲಿ ಮಯೂರಿ ರಫ್ ಅಂಡ್ ಟಫ್ ಲುಕ್‍ನ ಹಲವು ಶೇಡ್, ಮಗನನ್ನ ಹೆಚ್ಚಾಗಿ ಪ್ರೀತಿಸೋ ತಂದೆ ಅವಿನಾಶ್, ನಾಯಕ ಬಾಲಾಜಿ ಶರ್ಮಾರ ಫ್ರೀಡಂ ಎಲ್ಲವೂ ಟ್ರೈಲರಿನಲ್ಲಿ ಇದ್ದು, ಹಲವು ಭಾವನೆಗಳ ಮಿಶ್ರಣದೊಂದಿಗೆ ಕುತೂಹಲವನ್ನು ಹುಟ್ಟಿಸುವಂತಿದೆ.

ನಿಶ್ಯಬ್ದಕ್ಕೂ ಅರ್ಥವಿದೆ ಎಂದು ಮೌನವನ್ನ ಮುರಿಯಲು ‘ಮೌನಂ’ ತಂಡ ರೆಡಿಯಾಗಿದೆ. ಇನ್ನೂ ಇದೊಂದು ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಪಂಚದಲ್ಲಿರುವ ಒಳ್ಳೆಯದ್ದು, ಕೆಟ್ಟದ್ದು ಎರಡನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕೆಂಬ ಅನೇಕ ಸಂದೇಶಗಳಿವೆ. ಪ್ರೀತಿ, ಪ್ರೇಮ ಹಾಗೂ ಸ್ನೇಹ ಎಲ್ಲಾ ಭಾವನೆಗಳ ಸಮ್ಮಿಲನವಿದೆ.

 

ರಾಜ್ ಪಂಡಿತ್ ಆ್ಯಕ್ಷನ್ ಕಟ್ ಹೇಳಿರೋ ಈ ಕಥೆಯಲ್ಲಿ ಜಗತ್ತಿನ ಪಾಸಿಟಿವ್, ನೆಗೆಟಿವ್, ಬ್ಯಾಡ್ ಹ್ಯಾಬಿಟ್ಸ್ ಹಾಗೂ ಹವ್ಯಾಸಕ್ಕೆ ತುತ್ತಾಗಿ ಜೀವನವನ್ನೇ ಮೌನವಾಗಿಸುವ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಶ್ರೀ ಹರಿ ರೆಡ್ಡಿ ಬಂಡವಾಳ ಹಾಕಿರುವ ‘ಮೌನಂ’ ಸಿನಿಮಾ ಒಂದೊಳ್ಳೆ ಸಂದೇಶವಿಟ್ಟು ಬರುತ್ತಿದೆ. ಸದ್ಯಕ್ಕೆ ರಿಲೀಸ್ ಆಗಿರುವ ಟ್ರೈಲರ್ ನೋಡಿ ಎಂಜಾಯ್ ಮಾಡಬೇಕಿದೆ.