ನಿಶ್ಯಬ್ದಕ್ಕೂ ಶಬ್ದವಿದೆ ಎಂದು ವಿಭಿನ್ನ ಟ್ಯಾಗ್ ಲೇನ್ ಮೂಲಕವೇ ಈಗಾಗಲೇ ‘ಮೌನಂ’ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಇದೇ ತಿಂಗಳ. 21 ರಂದು ತೆರೆಗೆ ಬರಲು ಸಜ್ಜಾಗಿರುವ ‘ಮೌನಂ’ ಚಿತ್ರಕ್ಕೆ ಇಡೀ ಚಿತ್ರರಂಗವೇ ಕಾದು ಕುಳಿತಿದೆ. ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಒಂದಷ್ಟು ಮಂದಿಗೆ ಕುತೂಹಲದ ಜೊತೆಗೆ ಗೊಂದಲವನ್ನು ಹುಟ್ಟು ಹಾಕಿದೆ. ಅದರಲ್ಲೂ ನಟ ಪ್ರಜ್ವಲ್ ದೇವರಾಜ್, ನಟಿ ತೇಜಸ್ವಿನಿ ಸೇರಿದಂತೆ ಅನೇಕರು ‘ಮೌನಂ’ ಸಿನಿಮಾದ ಟ್ರೇಲರ್ ನೋಡಿ ಸಿನಿಮಾವನ್ನ ನೋಡಲೇಬೇಕೆಂಬ ಆತುರವನ್ನ ವ್ಯಕ್ತ ಪಡಿಸಿದ್ದಾರೆ.

ಸಿನಿಮಾದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮಾತನಾಡಿದ್ದು, ಮೌನಂ ಸಿನಿಮಾ ವಿಭಿನ್ನವಾಗಿದೆ. ಅಪ್ಪ ಮಗನ ನಡುವಿನ ಬಾಂಧವ್ಯ ಕಾಣುತ್ತೆ. ಹೋಗ್ತಾ ಹೋಗ್ತಾ ಅವರಿಬ್ಬರೇ ವೈರಿಗಳ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಬಹಳ ವಿಭಿನ್ನವಾಗಿದೆ. ರಾಜ್ ಪಂಡಿತ್ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಇನ್ನು ಅವಿನಾಶ್ ಅಂಕಲ್ ಲೆಜೆಂಡ್ ಇದ್ದ ಹಾಗೆ. ಅವರ ಆ?ಯಕ್ಟಿಂಗ್ ಕೂಡ ಸೂಪರ್ ಆಗಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಸಿನಿಮಾ ರಿಲೀಸ್ ಗಾಗಿ ನಾನು ಕಾಯ್ತಾ ಇದ್ದೀನಿ ಎಂಬ ಮಾತನ್ನ ಹೇಳಿದ್ದಾರೆ.

ಇನ್ನು ಇದೇ ಸಿನಿಮಾದ ಬಗ್ಗೆ ನಟಿ ತೇಜಸ್ವಿನಿ ಕೂಡ ಮಾತನಾಡಿದ್ದು, ರಾಜ್ ಪಂಡಿತ್ ಅವ್ರ ‘ಮೌನಂ’ ಚಿತ್ರದ ಟ್ರೇಲರ್ ನೋಡಿ ಸೀರಿಯಸ್ಲಿ ಫಿದಾ ಆಗೋದೆ. ಆನೆಸ್ಟ್ಲಿ ತುಂಬಾ ವಿಭಿನ್ನವಾಗಿ ಮಾಡಿದ್ದಾರೆ. ಈ ರೀತಿ ಕಥೆ ತೆಗೆದುಕೊಂಡು ಹೋಗ್ತಾರೆ ಅಂತ ನಿಜ ಗೊತ್ತಿರಲಿಲ್ಲ. ತುಂಬಾ ಕ್ಯೂರಿಯಾಸಿಟಿ ಇದೆ. ‘ಮೌನಂ’ ರಿಲೀಸ್ ಆದ ಕೂಡಲೇ ನೋಡ್ತೇನೆ. ಒಂದೊಳ್ಳೆ ಬಾಂಧವ್ಯವನ್ನ ಅಲ್ಲಿ ಕಟ್ಟಿಕೊಟ್ಟಿದ್ದಾರೆ. ಇವಾಗ್ಲೆ ಆ ಸಿನಿಮಾದ ಬಗ್ಗೆ ತಲೆಯಲ್ಲಿ ಹುಳ ಬಿಟ್ಟಾಗಿದೆ. ಸೋ ಸಿನಿಮಾಗಾಗಿ ಕಾಯ್ತಾ ಇದ್ದೀನಿ ಅಂದಿದ್ದಾರೆ.

ಬಾಲಾಜಿ ಶರ್ಮಾ ಹಾಗೂ ಮಯೂರಿ ಮುಖ್ಯಭೂಮಿಕೆಯಲ್ಲಿದ್ದು, ಹಿರಿಯ ನಟ ಅವಿನಾಶ್ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ರಾಜ್ ಪಂಡಿತ್ ಸಿನಿಮಾ ನಿರ್ದೇಶನ ಮಾಡಿದ್ದು, ಶ್ರೀಹರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆರವ್ ರಿಶಿಕ್ ಸಂಗೀತ, ಶಂಕರ್ ಛಾಯಾಗ್ರಹಣ ಸಿನಿಮಾಗಿದೆ.