ಮನುಷ್ಯನಿಗೆ ಮನುಷ್ಯನೆ ಶತ್ರು. ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟ ಹಾಕುವ ಮೊದಲು ನಮ್ಮೊಳಗಿರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಎಳೆಯನ್ನಿಟ್ಟುಕೊಂಡು ತಯಾರಾಗಿರುವ ಸಿನಿಮಾ ‘ಮೌನಂ’. ಈ ಪದ ಎಲ್ಲರಿಗೂ ಚಿರಪರಿಚಿತ. ಎಲ್ಲರ ಜೀವನದಲ್ಲೂ ಅವಾಗವಾಗ ಬಂದು ಹೋಗುವ ಬಂಧುವೇ ಸರಿ. ಮನಸ್ಸಿಗೆ ಬೇಜಾರಾದಾಗಲೋ, ಯಾರಿಗೂ ಹೇಳಿಕೊಳ್ಳಲಾಗದ ನೋವಿದ್ದಾಗಲೋ ಈ ಮೌನ ಎಂಬ ಸ್ನೇಹಿತ ನಮ್ಮನ್ನು ಆವರಿಸಿಕೊಂಡು ಬಿಡುತ್ತಾನೆ. ಈ ಸಿನಿಮಾದಲ್ಲೂ ಅಂತದ್ದೊಂದು ಮೌನವಿದೆ. ‘ಮೌನಂ’ ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಟ್ಯಾಗ್ ಲೈನ್ ನಾನಾ ವಿಚಾರಗಳನ್ನ ಹೇಳಲು ಹೊರಟಿದೆ. ಇದೇ 21ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಆ ಮೌನ ಯಾವುದು ಎಂಬ ಕುತೂಹಲಕ್ಕೆ ಉತ್ತರ ಸಿಗಲಿದೆ.

ಬಾಲಾಜಿ ಶರ್ಮಾನಿಗೆ ನಾಯಕಿಯಾಗಿ ಮಯೂರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಯೂರಿ ಸಿಕ್ಕಾಪಟ್ಟೆ ಮಾತುಗಾತಿ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ‘ಮೌನಂ’ನಲ್ಲಿ ಮಯೂರಿ ಮೌನವಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ‘ಮೌನಂ’ ಸಿನಿಮಾದಲ್ಲಿ ಮಯೂರಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ಅಮೇಜಿಂಗ್ ರೋಲ್ ಅಂತಾನೆ ಹೇಳಬಹುದು. ಒಂದು ಕಡೆ ಟಾಮ್ ಬಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡರೆ ಮತ್ತೊಂದು ಕಡೆ ಬೈಕ್ ಓಡಿಸುತ್ತಾ, ಸಿಗರೇಟ್ ಸೇದುವ ಪಾತ್ರದ ಹುಡುಗಿ. ಈ ಸಿನಿಮಾದ ಇಡೀ ಚಿತ್ರೀಕರಣವೇ ಮರೆಯಾಲಗದಂತ ನೆನಪನ್ನು ಉಳಿಸಿದೆ ಅಂತಾರೆ ನಟಿ ಮಯೂರಿ. ಜೊತೆಗೆ ನಿರ್ದೇಶಕರ ಬಗ್ಗೆ ಹಂಚಿಕೊಂಡಿರುವ ನಟಿ, ಚಿತ್ರಕ್ಕಾಗಿ ಬಹಳ ಹಾರ್ಡ್ ವರ್ಕ್ ಮಾಡಿದ್ದಾರೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕೂಡ ಹಾಗೆಯೇ ಸಿದ್ಧ ಮಾಡಿದ್ದಾರೆ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಎಲ್ಲ ಸಿನಿಮಾದಲ್ಲೂ ಪ್ರೇಮಕಥೆಯನ್ನ ನೋಡಿರಬಹುದು ಆದ್ರೆ ಈ ಸಿನಿಮಾದಲ್ಲಿ ಊಹಿಸಲು ಸಾಧ್ಯವಾಗದಂತ ಅದ್ಭುತ ಲವ್ ಸ್ಟೋರಿ ಇದೆ ಅಂತಾರೆ ನಟಿ ಮಯೂರಿ.

ಸಾಕಷ್ಟು ಭರವಸೆ ಹುಟ್ಟು ಹಾಕಿರುವ ‘ಮೌನಂ’ ಸಿನಿಮಾ ಇದೇ 21ಕ್ಕೆ ರಿಲೀಸ್ ಆಗುತ್ತಿದೆ. ಹಿರಿಯ ನಟ ಅವಿನಾಶ್ ಕೂಡ ತಮ್ಮ ಪಾತ್ರ್ ಬಗ್ಗರ ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ಮಯೂರಿ ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ್ ಎಸ್ ಸಾಹಿತ್ಯದ ಮೇಲೆ ಮೂರು ಹಾಡುಗಳು ಇಂಪಾಗಿ ಮೂಡಿ ಬಂದಿದ್ದು, ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರಾಜ್ ಪಂಡಿತ್ ‘ಮೌನಂ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಅವಿನಾಶ್, ಗುಣವಂತ ಮಂಜು, ರಿತೇಶ್, ಬಲರಾಂ, ರಿತೇಶ್, ನಯನಾ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.