ಸಿನಿ ಶುಕ್ರವಾರ ಸಿನಿರಸಿಕರ ಫೇವರೇಟ್ ದಿನ. ತಮ್ಮ ನೆಚ್ಚಿನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ವಾರ ಪ್ರೇಕ್ಷಕ ಪ್ರಭುಗಳನ್ನು ರಂಜಿಸಲು ಬಹು ನಿರೀಕ್ಷಿತ `ಸಾಗುತ ದೂರ ದೂರ’ ಚಿತ್ರ ಚಿತ್ರಮಂದಿರಕ್ಕೆ ಬರ್ತಿದೆ.

ಇಂಟ್ರಸ್ಟಿಂಗ್ ಕಥಾಹಂದರ, ಕಲರ್ ಫುಲ್ ಲೋಕೇಷನ್, ಕದ್ರಿ ಮಣಿಕಾಂತ್ ಮ್ಯೂಸಿಕ್ ಸಾಗುತ ದೂರ ದೂರ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಜರ್ನಿಯಲ್ಲೇ ಸಾಗೋ ಚಿತ್ರದ ಕಥೆಯು ಪ್ರೇಕ್ಷಕರಿಗೆ ಥ್ರಿಲ್ ನೀಡಲಿದ್ದು ಹೊಸ ಅನುಭವ ನೀಡಲಿದೆ. ರವಿತೇಜ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ತುಂಬಾ ಪ್ಯಾಶನೇಟ್ ಆಗಿ ಸಿನಿಮಾವನ್ನು ನಿರ್ದೇಶನ ಮಾಡಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಅಮಿತ್ ಪೂಜಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಖುಷಿ ಕನಸು ಬ್ಯಾನರ್ ನಡಿ ‘ಸಾಗುತ ದೂರ ದೂರ’ ಚಿತ್ರ ನಿರ್ಮಾಣವಾಗಿದೆ.

ತಾಯಿ ಮಗನ ಸೆಂಟಿಮೆಂಟ್ ಚಿತ್ರದಲ್ಲಿದ್ದು, ಕಥೆಯೇ ಚಿತ್ರದ ಜೀವಾಳವಾಗಿರೋ ಈ ಚಿತ್ರದಲ್ಲಿ ಅಪೇಕ್ಷಾ ಪುರೋಹಿತ್, ಜಾನ್ವಿ ಜ್ಯೋತಿ, ಮಹೇಶ್, ಮಾಸ್ಟರ್ ಆಶಿಕ್, ಉಷಾ ಬಂಡಾರಿ, ನವೀನ್, ವಿಜಯ್ ತಾರಾಬಳಗದಲ್ಲಿ ಮಿಂಚಿದ್ದಾರೆ. ಇನ್ನೂರು ಸುಂದರ ಲೊಕೇಷನ್ ಗಳಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಅಭಿ ಕ್ಯಾಮೆರಾ ಕೈಚಳಕ ಚಿತ್ರದಲ್ಲಿದೆ. ಚಿತ್ರದ ಬಗ್ಗೆ ಎಲ್ಲಾ ಕಡೆಗಳಲ್ಲೂ ಒಳ್ಳೆಯ ಟಾಕ್ ಕ್ರಿಯೇಟ್ ಆಗಿದ್ದು ಈ ಶುಕ್ರವಾರ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಲಿದೆ.